ಸುಕೀರ್ತಿ ಕಾಂಡ್ಪಾಲ್ (ಜನನ :೨೦ ನವೆಂಬರ್ ೧೯೮೭) ದಿಲ್ ಮಿಲ್ ಗಯೆ, ಪ್ಯಾರ್ ಕಿ ಯೆ ಏಕ್ ಕಹಾನಿ, ದಿಲ್ಲಿ ವಾಲಿ ಠಾಕೂರ್ ಗುರ್ಲ್ಸ್ ಕಾರ್ಯಕ್ರಮಗಳಲ್ಲಿ ತನ್ನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ೨೦೧೪ ರಲ್ಲಿ ಅವರು ಕೈಸಾ ಯೆ ಇಶ್ಕ್ ಹೈ ... ಅಜಬ್ ಸಾ ರಿಸ್ಕ್ ಹೈ ಧಾರವಾಹಿಯಲ್ಲಿ ಕಾಣಿಸಿಕೊಂಡರು. ಅವರು ಬಿಗ್ ಬಾಸ್ 8 ರಲ್ಲಿ ಸ್ಪರ್ಧಿಯಾಗಿದ್ದರು.೨೦೧೭ ರಲ್ಲಿ, ಝೀ ಟಿವಿಯ ಕಾಲಾ ಟೀಕಾ, ಸೀಸನ್ 2 ನಲ್ಲಿ ಇವರು ಪ್ರಮುಖ ಪಾತ್ರ ವಹಿಸಿದರು. ಇವರು ೨೦೧೯ ರಲ್ಲಿ ಸಾವ್ಧಾನ್ ಇಂಡಿಯಾ - ವಿಶೇಷ ಅಪರಾಧ ಸರಣಿಯಲ್ಲಿ ‘ಚೌಸರ್’ ನಲ್ಲಿ ಕಾಣಿಸಿಕೊಂಡಿದ್ದಾರೆ. == ಆರಂಭಿಕ ಜೀವನ ಮತ್ತು ಶಿಕ್ಷಣ == ಸುಕೀರ್ತಿ ಇವರು ಉತ್ತರಾಖಂಡದ ನೈನಿತಾಲ್ ನಲ್ಲಿ ಬಿ.ಡಿ. ಕಾಂಡ್‌ಪಾಲ್ ಮತ್ತು ಮಂಜು ಕಾಂಡ್‌ಪಾಲ್ ದಂಪತಿಗಳಿಗೆ ಜನಿಸಿದರು . ಅವರಿಗೆ ಇಬ್ಬರು ಒಡಹುಟ್ಟಿದವರು, ಹಿರಿಯ ಸಹೋದರಿ ಭಾವನಾ ಕಾಂಡ್ಪಾಲ್ ಮತ್ತು ಕಿರಿಯ ಸಹೋದರ ಮಂಜುಲ್ ಕಾಂಡ್ಪಾಲ್. ಇವರು ನೈನಿತಾಲ್ ನ ಸೇಂಟ್ ಮೇರಿಸ್ ಕಾನ್ವೆಂಟ್ ಪ್ರೌಢ ಶಾಲೆ ಮತ್ತು ಸೋಫಿಯಾ ಕಾಲೇಜ್ ಫಾರ್ ವುಮೆನ್ ನಲ್ಲಿ ವ್ಯಾಸಂಗ ಮಾಡಿದರು. == ವೃತ್ತಿಜೀವನ == === ದೂರದರ್ಶನ === === ಅತಿಥಿ ಮತ್ತು ನಿರೂಪಕಿಯಾಗಿ === == ಉಲ್ಲೇಖಗಳು ==